ಚರ (ಮೊಬೈಲ್) ದೂರವಾಣಿ

ಚರ (ಮೊಬೈಲ್) ದೂರವಾಣಿ ಬಳಕೆ ಇಂದು ಸರ್ವೇ ಸಾಮಾನ್ಯವಾಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡ ಸಂಸ್ಥೆಯ ಅಧ್ಯಕ್ಷರವರೆಗೆ ಎಲ್ಲರೂ ಚರ ದೂರವಾಣಿ ಬಳಸುತ್ತಾರೆ. ಪ್ರತಿಯೊಂದು ಚರ ದೂರವಾಣಿಗೂ ಅದರದೇ ಆದ ಒಂದು ಗುರುತಿನ ಸಂಖ್ಯೆ ಇರುತ್ತದೆ. ಈ ಗುರುತಿನ ಸಂಖ್ಯೆಗೆ ಕರೆ ನೀಡಿದಾಗ ಆ ಕರೆ ಉದ್ದೇಶಿತ ಚರ ದೂರವಾಣಿಯನ್ನು ತಲುಪುತ್ತದೆ. ಆ ಮೊಬೈಲಿನ ಪಕ್ಕದಲ್ಲಿ ನೂರಾರು ಚರ ದೂರವಾಣಿಗಳಿದ್ದರೂ ಒಳ ಬರುವ ಆ ಕರೆಗೆ ಯಾವುದೇ ತೊಂದರೆಯಾಗುವುದಿಲ್ಲ. 

ಒಂದು ಚರ ದೂರವಾಣಿಚೆನ್ನಾಗಿ ಕೆಲಸ ನಿರ್ವಹಿಸಬೇಕು ಎಂದರೆ ಅದಕ್ಕೆ ಎರಡು ಮುಖ್ಯ ಅಂಶಗಳು ಅಗತ್ಯ. ಮೊದಲನೆಯದು ಇಂಧನ. ಇದು ಚರ ದೂರವಾಣಿಯಲ್ಲಿಅಳವಡಿಸಿರುವ ಬ್ಯಾಟರಿಯಿಂದ ದೊರೆಯುತ್ತದೆ. ಎರಡನೆಯದು ಸಂಕೇತಗಳು (ಸಿಗ್ನಲ್). ಈ ಸಂಪರ್ಕಜಾಲದ ಸಂಕೇತಗಳು (ನೆಟ್‍ವರ್ಕ್ ಸಿಗ್ನಲ್) ಅತ್ಯಗತ್ಯ. ನಗರದ ತುಂಬಾ ಈ ಸಂಕೇತಗಳನ್ನು ಪ್ರಸರಿಸುವ ಗೋಪುರಗಳ ದೊಡ್ಡ ಜಾಲವೇ ಹರಡಿರುತ್ತದೆ. ಒಂದು ಚರ ದೂರವಾಣಿ ಕಂಪನಿ ಮೊದಲಿಗೆ ಊರಿನ ಎತ್ತರದ ಸ್ಥಳಗಳಲ್ಲಿ ಈ ಚರ ದೂರವಾಣಿ ಸಂಕೇತ ಗೋಪುರಗಳನ್ನು ಸ್ಥಾಪಿಸುತ್ತದೆ.. ಇಂಥ ಒಂದು ಗೋಪುರ ಸುತ್ತಣ ಸುಮಾರು 2 ರಿಂದ 8 ಕಿ.ಮೀ. ಪರಿಧಿಯಲ್ಲಿ ತನ್ನ ಸಂಕೇತಗಳನ್ನು ಪ್ರಸಾರ ಮಾಡಬಲ್ಲದ್ದಾಗಿರುತ್ತದೆ.. ಮೊಬೈಲ್‍ಗಳ ಸಾಂದ್ರತೆ ಹಾಗೂ ಗೋಪುರದ ಪ್ರಸಾರ ಸಾಮಥ್ರ್ಯವನ್ನು ಅವಲಂಬಿಸಿ ಈ ಪರಿಧಿ ವ್ಯತ್ಯಾಸ ಹೊಂದುತ್ತದೆ. ಅಂದರೆ ಊರಿನ ಮಧ್ಯದಲ್ಲಿರುವ ಗೋಪುರ ಒಂದು ಕಿ.ಮೀ. ಪರಿಧಿಯ ಎಲ್ಲ ಮೊಬೈಲ್‍ಗಳಿಗೆ ಸಂಕೇತಗಳನ್ನು ನೀಡಿದರೆ ಊರಾಚೆಯ ಗೋಪುರ 4 ರಿಂದ 5 ಕಿ.ಮೀ. ದೂರದಲ್ಲಿ ಬರುತ್ತಿರುವ ಕೆಲವು ಮೊಬೈಲ್‍ಗಳಿಗೆ ಸಂಕೇತಗಳನ್ನು ನೀಡಬಲ್ಲದು. 

ಈ ರೀತಿ ಚಾಲನೆಗೊಂಡು ಚೆನ್ನಾಗಿ ಕೆಲಸ ಮಾಡುತ್ತಿರುವ ನೂರಾರು ಮೊಬೈಲ್‍ಗಳು ಒಂದಕ್ಕೊಂದು ಸಂಪರ್ಕಿಸಲು ಹಾಗೂ ಆ ಸಂಪರ್ಕವನ್ನು ಮುಂದುವರೆಸಿಕೊಂಡು ಹೋಗಲು ಬೇಕಾದ ಇನ್ನೊಂದು ಪರಿಕರ ಎಂದರೆ ಚರ ದೂರವಾಣಿದೂರವಾಣಿ ಮಾತೃ ಗಣಕ. ಅಂದರೆ MTSO (Mobile Telephone Switching Office).
ಈ ಮಾತೃ ಗಣಕ (MTSO) ದಲ್ಲಿ ಯಾವ ಚರ ದೂರವಾಣಿಊರಿನ ಯಾವ ಭಾಗದಲ್ಲಿ ಸಂಚರಿಸುತ್ತದೆ ಎಂಬುದನ್ನು ಬೇಕಾದಾಗ ತಿಳಿಯಬಹುದು. ಯಾವುದೇ ಚರ ದೂರವಾಣಿ ಆರಂಭ(ಆನ್)ವಾದ ಕೂಡಲೇ ಮೊದಲು ಮಾಡುವ ಕೆಲಸ ಎಂದರೆ ತನ್ನ ಹತ್ತಿರದ ಸಂಕೇತಗೋಪುರಕ್ಕೆ ಸಂಪರ್ಕಿಸುವುದು. ಅದರಿಂದ ಸಂಪರ್ಕ ಪಡೆದು ತನ್ನ ಇರುವಿಕೆಯ ಬಗ್ಗೆ ಚರ ದೂರವಾಣಿದಾಖಲಿಸುತ್ತದೆ. ಒಂದು ವೇಳೆ ಸನಿಹದಲ್ಲಿ ಎಲ್ಲೂ ಅಂಥ ಸಂಕೇತಗೋಪುರ (Sigಟಿಚಿಟ ಖಿoತಿeಡಿ) ಸಿಗದೆ ಹೋದಾಗ ಚರ ದೂರವಾಣಿಕೆಲಸ ಮಾಡುವುದಿಲ್ಲ. ಆಗ ನಾವು "ಇಲ್ಲಿ ಸಂಪರ್ಕಜಾಲ (ನೆಟ್‍ವರ್ಕ್) ಇಲ್ಲ" ಎಂದು ಮಾತನಾಡಿಕೊಳ್ಳುತ್ತೇವೆ. 

ಕರೆ ಸ್ಥಿರಗೊಳ್ಳುವ ರೀತಿ: ಈಗ ಮಲ್ಲೇಶ್ವರದಲ್ಲಿರುವ A  ಎಂಬ ವ್ಯಕ್ತಿ ಜಯನಗರದಲ್ಲಿರುವ B ಎಂಬ ವ್ಯಕ್ತಿಗೆ ಚರ ದೂರವಾಣಿ ಕರೆ ನೀಡುತ್ತಾನೆ. ಈ ಕರೆ ಹೇಗೆ ಕೆಲಸ ಮಾಡುತ್ತದೆ ನೋಡೋಣ. 
ತನ್ನ ಚರ ದೂರವಾಣಿಯನ್ನು ತೆಗೆದು ತನಗೆ ಬೇಕಾದ ಸಂಖ್ಯೆಯನ್ನು ಒತ್ತಿ ಕರೆ ಮಾಡುತ್ತಾನೆ. ಹಾಗೆ ಅವನು ತನಗೆ ಬೇಕಾದ ಸಂಖ್ಯೆಯನ್ನು ಒತ್ತಿದಾಗ ಚರ ದೂರವಾಣಿತಾನು ಸಂಪರ್ಕ ಹೊಂದಿರುವ ಸಮೀಪದ ಸಂಪರ್ಕ ಗೋಪುರಕ್ಕೆ ಈ ಮಾಹಿತಿ ರವಾನೆ ಮಾಡುತ್ತದೆ. ಸಂಪರ್ಕಗೋಪುರ ಈ ಮಾಹಿತಿಯನ್ನು ಅಂದರೆ B' ಯ ನಂಬರನ್ನು ಮಾತೃಗಣಕ (MTSO) ಕ್ಕೆ ತಲುಪಿಸುತ್ತದೆ. MTSO ತನ್ನಲ್ಲಿ B ಎಲ್ಲಿದ್ದಾನೆ ಎಂಬ ಮಾಹಿತಿ ಇದ್ದರೆ ಕೂಡಲೇ ಕರೆಯನ್ನು ಅಲ್ಲಿಗೆ ರವಾನಿಸುತ್ತದೆ. ಇಲ್ಲದಿದ್ದಲ್ಲಿ ಎಲ್ಲ ಗೋಪುರಗಳಿಗೆ B ಯ ಸಂಖ್ಯೆಯನ್ನು ಕಳಿಸುತ್ತದೆ. ಪತ್ತೆ ಮಾಡಲು  B ಇರುವ ಪ್ರದೇಶದಿಂದ — ಅಂದರೆ ಜಯನಗರದಿಂದ ಅಲ್ಲಿರುವ ಗೋಪುರದಿಂದ ಮಾಹಿತಿ ಬಂದಾಗ ಕರೆಯನ್ನು ಅಲ್ಲಿಗೆ ರವಾನಿಸುತ್ತದೆ. A ಯ ಕರೆ ಜಯನಗರದ ಗೋಪುರದ ಮೂಲಕ B ಯ ಮೊಬೈಲಿಗೆ ತಲುಪುತ್ತದೆ. ಹೀಗೆ A ಯ ಚರ ದೂರವಾಣಿಮೂಲಕ ಹೊರಟ ಕರೆ ಮಲ್ಲೇಶ್ವರದ ಸಂಕೇತಗೋಪರ ತಲುಪಿ, ಅಲ್ಲಿಂದ ಜಯನಗರದ ಸಂಕೇತ ಗೋಪುರದ ಮೂಲಕ B ಯ ಚರ ದೂರವಾಣಿಯನ್ನು ತಲುಪುತ್ತದೆ. ತನ್ನ ಚರ ದೂರವಾಣಿಯಲ್ಲಿಕರೆ ಬಂದುದನ್ನು ಗಮನಿಸಿದಾಗ B ಉತ್ತರಿಸುತ್ತಾನೆ. A ಹಾಗೂ B ಯ ಮಧ್ಯೆ ಮಾತುಕತೆ ಶುರುವಾಗುತ್ತದೆ. 

ಈಗ B ಜಯನಗರದಿಂದ ಮಾತನಾಡುತ್ತ ಬನಶಂಕರಿಯ ಕಡೆಗೆ ಹೋಗುತ್ತಿದ್ದಾನೆ ಎಂದುಕೊಳ್ಳೋಣ. ಅಂದರೆ ಒಂದು ಬಡಾವಣೆಯಿಂದ ಪಕ್ಕದ ಬಡಾವಣೆಗೆ ಹೋಗುತ್ತಿದ್ದಾನೆ. ಆಗ ಕರೆ ಹೇಗೆ ಮುಂದುವರಿಯುವುದು ಎಂದು ಗಮನಿಸೋಣ. 
A ಯ ಜೊತೆ ಮಾತನಾಡುತ್ತ B ಬನಶಂಕರಿಯ ಕಡೆಗೆ ಹೋಗುತ್ತಿದ್ದಂತೆ ಬನಶಂಕರಿಯ ಸಂಕೇತಗೋಪರಕ್ಕೂ B ಸಂಪರ್ಕ ಸಂಕೇತಗಳು ಬರುತ್ತದೆ. ಯಾಕೆಂದರೆ ಚರ ದೂರವಾಣಿತನ್ನ ಸುತ್ತಲಿನ ಎಲ್ಲ ಗೋಪುರಗಳಿಗೆ ಸಂಪರ್ಕ ಸಂಕೇತಗಳನ್ನು ಕಳಿಸುತ್ತಲೇ ಇರುತ್ತದೆ. ಹೇಗೆ B ಬನಶಂಕರಿಯತ್ತ ಚಲಿಸುತ್ತಿರುತ್ತಾನೋ ಹಾಗೆ ಅವನ ಚರ ದೂರವಾಣಿಸಂಕೇತಗಳೂ ಚಲಿಸಿ ಒಂದು ಹಂತದಲ್ಲಿ ಜಯನಗರದ ಸಂಕೇತಗೋಪುರದ ಮೂಲಕ ನಡೆಯುತ್ತಿರುವ ಸಂಭಾಷಣೆ ಬನಶಂಕರಿಯ ಸಂಕೇತ ಗೋಪುರಕ್ಕೆ ಬದಲಾವಣೆ ಹೊಂದುತ್ತದೆ. 

ಒಂದು ವೇಳೆ B ಯು ಜಯನಗರದಲ್ಲಿ ಇರದೇ ಹುಬ್ಬಳ್ಳಿಯಲ್ಲೊ ದಾವಣಗೆರಯಲ್ಲೊ ಇದ್ದರೆ, ಮಲ್ಲೇಶ್ವರದಿಂದ ಹೊರಟ ಸಂಕೇತಗಳು ಬೆಂಗಳೂರು MTSOದಿಂದ ಹುಬ್ಬಳ್ಳಿ MTSO ತಲುಪಿ, ಅಲ್ಲಿ B ಇರುಬಹುದಾದ ಪ್ರದೇಶದಿಂದ (ಉದಾ: ದುರ್ಗದ ಬೈಲ್) ಅಲ್ಲಿಯ ಸಂಕೇತ ಗೋಪುರದಿಂದ ಉತ್ತರ ಪಡೆಯಬಹುದು. 

ಆದರೆ ಅದೇ B ಯು ಚಲಿಸುತ್ತ ಚಲಿಸುತ್ತ ಬೆಂಗಳೂರಿನ ಹೊರಗೆ ಹೋದರೆ ಕೆಲಸಮಯ ನಂತರ ಸಂಪರ್ಕ ಕಡಿಯುತ್ತದೆ. ಯಾಕೆಂದರೆ ಬೆಂಗಳೂರಿನ ತುದಿಯಲ್ಲಿರುವ ಸಂಕೇತ ಗೋಪುರ ಊರಿಂದ ಹೊರಗೆ 6 ರಿಂದ 8 ಕಿ.ಮೀ. ದೂರದವರೆಗೆ ತನ್ನ ಸಂಕೇತಗಳನ್ನು ಕಳಿಸಬಹುದು. ಅದಕ್ಕಿಂತ ದೂರದಲ್ಲಿದ್ದಾಗ ಸಂಕೇತಗಳು ಸಿಗದೆ ಸಂಪರ್ಕ ಮೊಬೈಲ್‍ಗೆ ಸಿಗದೆ ಮಾತುಕತೆ ನಿಂತು ಹೋಗುತ್ತದೆ. ಚರ ದೂರವಾಣಿಪರದೆಯ ಮೇಲೆ ನೋ ಸಿಗ್ನಲ್  — ಅಂದರೆ ಸಂಪರ್ಕ ಸಂಕೇತಗಳಿಲ್ಲ ಎಂದು ಮೂಡಿ ಬರುತ್ತದೆ. 

ಮೊಬೈಲ್‍ಗಳು ಬಳಸುವ ತಂತ್ರಜ್ಞಾನದಲ್ಲಿ ಎರಡು ಬಗೆಯವು.
ಜಿ ಎಸ್ ಎಂ ತಂತ್ರಜ್ಞಾನ( ಗ್ಲೋಬಲ್ ಸಿಸ್ಟಮ್ ಮಾನಿಟರ್)
ಸಿ ಡಿ ಎಂ ಎ  ತಂತ್ರಜ್ಞಾನ( ಕೋಡ್ ಡಿವಿಷನ್ ಮಲ್ಟಿಪಲ್ ಆಕಕ್ಸೆಸ್)
ತಂತ್ರಜ್ಞಾನ ಯಾವುದೇ ಇದ್ದರೂ ಬಳಸುವ ವ್ಯಕ್ತಿಗೆ ಬಳಸುವಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೂ ಎರಡೂ ತಂತ್ರಜ್ಞಾನಗಳ ಮೂಲ ವ್ಯತ್ಯಾಸವನ್ನು ತಿಳಿಯುವುದು ಮುಖ್ಯ.
ಜಿ ಎಸ್ ಎಂ ತಂತ್ರಜ್ಞಾನದಲ್ಲಿ ಸಿಮ್ (ಎಸ್ ಐ ಎಂ) ಎಂಬ ಪುಟ್ಟ ವಿದ್ಯುನ್ಮಾನ  ಕಾರ್ಡ್ ಒಂದನ್ನು ಚರ ದೂರವಾಣಿಸೆಟ್ ಒಳಗೆ ಒಂದು ನಿರ್ಧಾರಿತ ಜಾಗದಲ್ಲಿ ಸೇರಿಸಿರುತ್ತಾರೆ. ಈ ಪುಟ್ಟ ಕಾರ್ಡಿನಲ್ಲಿರುವ ಪುಟ್ಟ ಸರ್ಕೀಟ್ ಒಂದು ವಿದ್ಯುತ್ ಕಾಂತೀಯ ಅಲೆಗಳನ್ನು ಸಂಕೇತಗೋಪುರಕ್ಕೆ ಕಳಿಸುವ ಹಾಗೂ ವಾಪಸ್ ಪಡೆಯುವ ಕೆಲಸ ಮಾಡುತ್ತದೆ. ಈ ಕಾರ್ಡಿನ ಆಧಾರದ ಮೇಲೆ ಆ ಮೊಬೈಲಿನ ಸಂಖ್ಯೆ ನಿರ್ಧಾರವಾಗುತ್ತದೆ. ಗ್ರಾಹಕ ತನ್ನ ಚರ ದೂರವಾಣಿಯನ್ನು ಬದಲಿಸಬೇಕು ಎಂದರೆ ಹೊಸ ಚರ ದೂರವಾಣಿಸೆಟ್ ಒಂದನ್ನುಕೊಂಡು ಈ ಪುಟ್ಟ ಸಿಮ್  ಕಾರ್ಡನ್ನ (ಇದು 5 ರೂ. ಅಂಚೆ ಚೀಟಿಯ ಅರ್ಧದಷ್ಟು ಆಕಾರದಲ್ಲಿ ಇರುತ್ತದೆ) ಅದಕ್ಕೆ ಬದಲಾಯಿಸಿದರೆ ಸಾಕು. ನಿಮ್ಮ ಹೊಸ ಮೊಬೈಲ್‍ಸೆಟ್‍ಗಳ ಸಂಖ್ಯೆಯೊಂದಿಗೆ ಕೆಲಸ ಆರಂಭಿಸುತ್ತದೆ.
ಇನ್ನು ಸಿ ಡಿ ಎಂ ಎ  ತಂತ್ರಜ್ಞಾನದಲ್ಲಿ ಈ ರೀತಿ ಸಿಮ್  ಇರುವುದಿಲ್ಲ. ಅದರಲ್ಲಿ ನಿಮಗೆ ಕೊಟ್ಟ ಚರ ದೂರವಾಣಿಪರಿಕರ (ಹ್ಯಾಂಡಸೆಟ್)ದಲ್ಲಿ ನಿಮಗೆ ನಿಗದಿಯಾದ ಸಂಖ್ಯೆಯನ್ನು ಅಳವಡಿಸುತ್ತಾರೆ. ನೀವು ನಿಮ್ಮ ಚರ ದೂರವಾಣಿಪರಿಕರ (ಹ್ಯಾಂಡಸೆಟ್) ಬದಲಿಸಬೇಕು ಎಂದರೆ ಸಂಪರ್ಕದಾತ (ಸರ್ವೀಸ್ ಪ್ರೊವೈಡರ್) ಸಂಸ್ಥೆಗೆ ಹೋಗಿ ಬದಲಿಸಬೇಕು.
ನಮ್ಮ ರಾಜ್ಯದಲ್ಲಿ ಏರಟೆಲ್, ಸ್ಪೈಸ್ ಹಾಗೂ ಹಚ್ ಸಂಸ್ಥೆಗಳ ಜಿ ಎಸ್ ಎಂ ತಂತ್ರಜ್ಞಾನ ಬಳಸಿದರೆ ಟಾಟಾ ಇಂಡಿಕಾಮ್ ಹಾಗೂ ರಿಲೆಯನ್ಸ್ ಸಂಸ್ಥೆಗಳು ಸಿ ಡಿ ಎಂ ಎ  ತಂತ್ರಜ್ಞಾನವನ್ನು ಬಳಸುತ್ತದೆ. 
                                          ಆರ್ ಕೆ

			(ರವೀ ಕುಸವಿ)
                       ಭಾರತೀಯ ಸ್ಟೇಟ್ ಬ್ಯಾಂಕು
                       ಪ್ರಾದೇಶಿಕ ಕಚೇರಿ  
                       ಸಂತ ಮಾರ್ಕರ ರಸ್ತೆ
                       ಬೆಂಗಳೂರು 560 001

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ